ಇವರ ನಗು ಇನ್ನೂ ನಿಂತಿಲ್ಲ
ನನ್ನ ನೋವು ಮುಗಿದಿಲ್ಲ
ಇವರು ನಗುತಲೇ ಇರುವರು
ನನ್ನ ಹುಚ್ಚು ಪ್ರೇಮದ ಕಥೆ ಕೇಳಿ
ನೀ ಮಾಡಿದ ಅಣೆಗಳೆಲ್ಲಾ ಸುಳ್ಳಂತೆ
ನೀ ಕೊಟ್ಟ ಭರವಸೆಗಳೆ ಪೊಳ್ಳಂತೆ
ನಾನೆಂದೆ ಇಲ್ಲಾ ಅವಳಿಗಲ್ಲಿ ಬರಿ ನನದೆ ನೆನಪೆಂದು
ಅವರೆಂದರು ನೀನಾಗಲೇ ಮತ್ತೊಬ್ಬನ ಸ್ವತ್ತೆಂದು
ಪ್ರೀತಿ ಮಾಡಿ ಸತ್ತು ಹೋದವರಿಗೆ ಅಳುವ ಹಕ್ಕಿಲ್ಲವಂತೆ
ಮೋಸ ಮಾಡಿದವರಿಗೆ ಅದರ ಹಂಗಿಲ್ಲವಂತೆ
ನೀ ಮಾಡಿದ್ದು ಮೋಸಾನಾ? ಪ್ರೀತಿನಾ?
ನಾನು ಎರಡನೇಯವಂತೆ ನೀನು ಮೊದಲಿಗಳಂತೆ
ಅಮವಾಸೆಯ ಕರಾಳ ರಾತ್ರಿಗಳಲ್ಲಿ ಬರಿ ನಮ್ಮಿಬ್ಬರದೆ ಚರ್ಚೆ ಇಲ್ಲಿ
ನನಗಿನ್ನೂ ನೆನಪಿದೆ ಆ ಕ್ಷಣ
ಈಗ ಬಂದೆ ಎಂದು ಎದ್ದು ಹೋದ ಆ ದಿನ
ನೀ ಕಟ್ಟಿ ಕೊಟ್ಟ ಕನಸುಗಳ ಮೂಟೆ ನನ್ನೆದೆಯ ಬಿರಿಯುತಿದೆ
ಎಲ್ಲ ಲೋಕನಿಂದಿತರ ನಡುವೆ ನಾನೊಬ್ಬಪ್ರೇಮನಿಂದತನಿರುವೆ ಇಲ್ಲಿ
ಒಂದು ಸಾರಿ ಬಂದು ನೋಡು ನಾ ಮಲಗಿರುವ ಗೋರಿಯ ಜಾಗವನು
ನಿನ್ನ ನೆನಪು ನಿನ್ನ ಕನಸು, ನಿನ್ನ ಪ್ರೀತಿ,ಎಲ್ಲ ಕೆಂಡ ಸಂಪಿಗೆಯಾಗಿ ಅರಳಿ ನಿಂತಿವೆ
ಇಲ್ಲಿಒಮ್ಮೆ ನೀ ಹೇಳು ನನಗೆ ನಿನ್ನ ಮೋಸ ಸುಳ್ಳಾ? ಪ್ರೀತಿ ಸುಳ್ಳಾ?
ಇವರ ನಗು ಇನ್ನೂ ನಿಂತಿಲ್ಲ
ನನ್ನ ನೋವು ಮುಗಿದಿಲ್ಲ
ಇವರು ನಗುತಲೇ ಇರುವರು
ನನ್ನ ಹುಚ್ಚು ಪ್ರೇಮದ ಕಥೆ ಕೇಳಿ
ನಾನಿನ್ನು ಯೋಚಿಸುತಲಿರುವೆ ತಪ್ಪು ನನ್ನದಿತ್ತಾ ನಿನ್ನದಿತ್ತಾ
ಒಮ್ಮೆ ಬಂದು ಕಾರಣ ಹೇಳಿ ಹೋಗು ನನ್ನಿ ಗೋರಿಗಳ ಸಮೂಹಕ್ಕೆ
2 comments:
ಯಾವದೂ ಶಾಶ್ವತವಲ್ಲ, ಮಿತ್ರ.
ಹಳೆಯ ಪ್ರೇಮವನ್ನು ಮರೆತು, ಹೊಸ ಜೀವನಕ್ಕೆ (ಪ್ರೇಮಕ್ಕೆ) ಸಿದ್ಧನಾಗು.
ಸುಂದರ ಕಲ್ಪನೆ (!)
ಚೆನ್ನಾದ ಕವಿತೆ.
ದಿವಂಗತ ಸಾಯದಿರಲಿ.
Post a Comment