ನನಗ್ಯಾವುದೇ ದುಖಃವಿರಲಿಲ್ಲ ಗೆಳತಿ
ನಿನ್ನೊಂದಿಗೆ ಪ್ರೇಮವಾಗುವುದಕ್ಕಿಂತ ಮೊದಲು
ಯಾರೋದಿಂಗೆ ದ್ವೇಷವು ಇರಲಿಲ್ಲ
ನಿನ್ನ ಗೆಳೆತನ ವಾಗುವುದಕ್ಕಿಂತ ಮೊದಲು.
ನನ್ನ ದುರ್ದೈವವಿದು ನಿನ್ನ ತಪ್ಪಲ್ಲ
ನಿನ್ನ ಪ್ರೀತಿಯಿಂದ ಆರಂಭವಾಗಬೇಕಿದ್ದ ನನ್ನ ಜೀವನ
ನಿನ್ನ ನೆನಪಿನಿಂದ ಕೊನೆಯಾಯಿತು.
ಓ ಚಂದ್ರ ಮರೆಯಾಗಿ ಬಿಡು ನೀನು
ನನ್ನಿ ಪ್ರೀತಿ ಸುಟ್ಟು ಹೋಗುತಿದೆ
ಅದರ ಜ್ವಾಲೆಗೆ ನೀ ಸಿಲುಕ ಬೇಡ
ನೀ ಕಪ್ಪಾದರೆ ಪ್ರೀತಿಸುವ ಜನ ಯಾರನ್ನು ಹುಡುಕಿಯಾರು.
ನಗು ಅರಳುತ್ತಿರಲಿಲ್ಲವೇನೊ ನನ್ನಲ್ಲಿ
ಈ ಪ್ರೀತಿ ಮೊಳಕೆಯೊಡೆಯದಿದ್ದರೆ.
ಪ್ರೀತಿಗೆ ಹುಟ್ಟಿದ ನಗುವಿಗೆ ಸಾವಿರ ದುಖಃಗಳ ಕೊಡುಗೆ .
ಕಡೆಯಾದಾಗಿ ನೀ ಅಂದ ಮಾತು,
ಇನ್ನೂ ನನ್ನಲ್ಲಿ ಪ್ರಶ್ನೆಯಾಗೆ ಉಳಿದಿದೆ
ಮರೆತು ಬಿಡು ನನ್ನನ್ನಾ ನಾ ನಿನ್ನವಳಲ್ಲ.
ನನಗ್ಯಾವುದೇ ದುಖಃವಿರಲಿಲ್ಲ ಗೆಳತಿ
ನಿನ್ನೊಂದಿಗೆ ಪ್ರೇಮವಾಗುವುದಕ್ಕಿಂತ ಮೊದಲು
ಯಾರೋದಿಂಗೆ ದ್ವೇಷವು ಇರಲಿಲ್ಲ
ನಿನ್ನ ಗೆಳೆತನ ವಾಗುವುದಕ್ಕಿಂತ ಮೊದಲು.
Wednesday, August 12, 2009
Friday, July 24, 2009
ಮತ್ತೆ ಹೇಗಿದೆ ನಿನ್ನ ಜೀವನ

ಹೌದೋ ಹುಡುಗ ನಿನ್ನೆ ಕೇಳಿದ್ದು ಹೇಗಿದೆ ನಿನ್ನ ಜೀವನ ಅಲ್ಲಿ ಮನುಷ್ಯರ ನಾಡಲ್ಲಿ . ಯಾಕೋ ಇವತ್ತು ತುಂಬಾ ನೆನಪಾದೆ ನೀ. ಅದಕ್ಕೆ ಇರಬೇಕು ನಾನು ಗೊರಿಯಾಳದಲ್ಲಿದ್ದರು ಬರೆಯುವ ಪ್ರಯತ್ನದಲ್ಲಿ .ಅದಕ್ಕೆ ಕಾರಣ ಇಷ್ಟೇ ಇವತ್ತು ಒಂದು ತುಂಬು ಯೌವನದ ಹುಡುಗಿಯ ಶವ ಹೂತು ಹೋದರು. ಅವೇ ಮಾಮೂಲಿ ಅಪ್ಪ ಅಮ್ಮನ ಕಣ್ಣಿರು. ಸಾಕಿ ಬೆಳೆಸಿದ ಮಗಳು ಸರಿಯಾದ ಸಮಯಕ್ಕೆ ಸತ್ತು ಹೋದಳೆಂಬ ಹಪಹಪಿ. ಇದೆಲ್ಲಾ ಸುಡುಗಾಡಿನಲ್ಲಿ ನಡೆಯುವುದು ಸಾಮಾನ್ಯ ಆಲ್ವಾ ??. ನೀನ ಯೋಚಿಸ್ತಾ ಇರಬೇಕಲ್ಲಾ ಏನಾಗಿದೆ ಇವಳಿಗೆ ಅಂತ . ನಿನಗೊಂದು ವಿಷ್ಯಾ ಗೊತ್ತಾ ಅವಳು ಸತ್ತಿದ್ದು ಕೂಡಾ ಥೇಟು ನನ್ನ ತರಾನೆ, ಮೊದಲು ನಾನಿದನ್ನು ನಂಬಲಿಲ್ಲ. ಹುಡುಗಿ ಸುಮ್ಮನೆ ಜಗತ್ತಿಗೆ ಅಂಜಿ ಈ ತರಹದ ಸಾವು ತಂದುಕೊಂಡಿರಬಹುದು ಅಂತ ಸುಮ್ಮನಿದ್ದೆ . ಆದರೆ ಅವಳು ಹೇಳಿದ ಕಾರಣಗಳು ಸತ್ತ ನನ್ನ ಎದೆಯನ್ನು ನಡುಗಿಸಿದವು ಗೊತ್ತಾ ನಿನಗೆ. ನೀನಗೆ ನಾನ ಹೇಳ್ತಿದಿನಿ ಅಂತ ಅರ್ಥ ಅಗಿರಬೇಕಲ್ಲ. ಇದನ್ನ ಹೇಳ್ತಾ ಇದ್ರೆ ಮನಸ್ಸು ಮತ್ತೆ ನನ್ನ ಜೀವನದ ಕಡೆಗೆ ಜಗ್ಗುತ್ತೆ. ಎನ್ಮಾಡ್ಲಿ ಹೇಳು ನೀನ ಮಾಡಿದ್ದೆನು ಕಡಿಮೆ ಮೋಸಾನಾ. ನಾನೇ ಹುಚ್ಚಿ, ಸತ್ತ ಮೇಲು ನಿನ್ನಾ ನನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತ್ಸಾ ಇದಿನಿ ಆದರೆ ಅದು ನಿನಗೆ ಇನ್ನೂ ಅರ್ಥಾ ಆಗಿಲ್ಲ. ನಿಜವಾಗ್ಲೂ ಹುಚ್ಚಿನೇ ನಾ. ಥಮ್ಸ್ ಅಪ್ ಜೊತೆ ವಿಷ ಬೇರೆಸಿಕೊಂಡು ಕುಡಿದು ಸತ್ಲಂತೆ ದೇಹ ಅನ್ನೊದು ನೀಲಿಗಟ್ಟಿ ವಿಕಾರವಾಗಿ ಉದಿಕೊಂಡಿತ್ತು. ಅದರ ಜೊತೆ ವಿಕ್ಟೊರಿಯಾ ಆಸ್ಪತ್ರೆಯವರ ಕೊಡುಗೆಯಾಗಿ ಅಲ್ಲಲ್ಲಿ ಅವಳ ಮೈತುಂಬ ಹೊಸ ಗಾಯದ ಗುರುತುಗಳು. ಪ್ರೀತಿಸಿದವರ ಹಣೆಬರಹವೇ ಇಷ್ಟು ಅನ್ಸುತ್ತೆ. ಬದುಕಿದಾಗ ಒಂಥರ ಹಿಂಸೆ ಸತ್ತಮೇಲೆ ಇನ್ನೊಂಥರ ಹಿಂಸೆ. ಹುಡುಗಾ ಮತ್ತೆ ಕೇಳ್ತಿನಿ ಅಂತ ಬೇಜಾರಾಗಬೇಡ. ನೀ ನನಗೆ ಆಷ್ಟೋಂದು ದೊಡ್ಡ ಪ್ರಮಾಣದಲ್ಲಿ ಮೋಸ ಮಾಡುವ ಅಶ್ಯಕತೆಯಿತ್ತಾ??? ನಮ್ಮಿಬ್ಬರ ಮೊದಲ ಮಿಲನಕ್ಕೆ ಹುಟ್ಟಲಿದ್ದ ಮಗುವಿಗೆ ಹಿಮು ಅಂತ ಹೆಸರು ಕೊಟ್ಟಿದ್ದು ನೀನೆ ತಾನೆ . ಅಲ್ಲಿಯವಗೆ ಎಷ್ಟೊಂದು ಒಳ್ಳೆಯ ಗೆಳೆಯನಾಗಿದ್ದೆ ನೀ ಅದು ಮುಗಿದ ಮೇಲೆ ಯಾಕೆ ಹಾಗಾಡಿದೆ. ಪ್ರೀತಿ ಅಂದ್ರೆ ಬರಿ ಅಷ್ಟೇನಾ? ಆಮೇಲೆ ಆಮೇಲೆ ನೀ ನನ್ನತ್ತ ನೋಡೊದನ್ನೆ ಬಿಟ್ಟೆ ಅಲ್ವಾ. ನಾನಾದ್ರೂ ನನ್ನ ಹೊಟ್ಟೆಲಿದ್ದ ನಿನ್ನ ಪ್ರೀತಿಯ ಕುರುಹನ್ನ ಕಾಪಾಡಬೇಕು ಅಂತ ಎಷ್ಟೋಂದು ಪ್ರಯತ್ನ ಪಟ್ಟೆ ಆದರೆ ನಿನ್ನ ಲೋಕದಲ್ಲಿರುವ ಸುಸಂಕೃತ ಜನರು ಅದಕ್ಕೆ ಅವಕಾಶಾನೇ ಕೊಡಲಿಲ್ಲ. ಅವರು ನಿನ್ನ ಕುರುಹನ್ನು ಮಾತ್ರ ಈ ಲೋಕದಿಂದ ಸಾಗಿಸಲು ನೋಡಿದರು. ಅದನ್ನ ಒಂದೇ ಕಳಿಸುವುದು ಬೇಡವೆಂದು ನಾನು ಜೊತೆಗೆ ಬಂದೆ ಜಗತ್ತಿನ ದೊಡ್ಡ ತಮಾಷೆ ಯೆಂದರೆ ಅದೇ ಇರ್ಬೇಕು ನೋಡು ನೀನು ನನ್ನ ಮಣ್ಣಿಗೆ ನಿನ್ನ ಹೆಂಡತಿಯ ಜೊತೆಗೆ ಬಂದ್ದದ್ದು. ಪಾಪಾ ಈ ಹುಡುಗಿಗೂ ಅದೇ ಅನುಭವವಾಯಿತಂತೆ. ಅದಕ್ಕೆ ನಿನ್ನ ನೆಾಗಿ ಈ ಪತ್ರ ಗೆಳೆಯ ಒಪ್ಪಿಸಿಕೊ
ನಿನ್ನವಳು.
Tuesday, October 7, 2008
ಪ್ರೀತಿಯ ಕಥೆ
ಕೈ ಕೈ ಹಿಡಿದು ನಡೆದಾಡಲಿಲ್ಲ
ಮೋಹದ ಮಾತೇ ಆಡಲಿಲ್ಲ
ಪ್ರೇಮದ ಅ ಸೆಲೆಯಂತು ಮೊದಲೇ ಇಲ್ಲ
ಮತ್ತ್ಯಾಕೆ ಪ್ರೀತಿಸುವೆ ನೀ ನನ್ನ
ಪ್ರೀತಿ ಅನಂತ ಮೋಹದ ಭಾವ ನಿರಂತರ
ಹುಡುಗ ಸತ್ತು ಹೋದ ನಮಗ್ಯಾಕೆ
ಕೈ ಕೈ ಹಿಡಿದು ನಡೆದಾಡುವ ಹುಚ್ಚು
ಎನಂತ ಪ್ರೀತಿಸುವೇ ನೀ
ಮಣ್ಣಾದ ದೇಹ ಗೆದ್ದಲು ಹಿಡಿದ ಮೂಳೆಗಳ
ಹೊರತಾಗಿ ಮತ್ತೆನಿದೆ ನನ್ನಲ್ಲಿ
ಎಂದೂ ಮುಗಿಯದ ಪ್ರೀತಿ
ಪ್ರೀತಿಸುವ ಹೃದಯ ಇರುವಾಗ
ಮಣ್ಣಾದ ದೇಹದ ಮಾತೆಕೆ ಈಗ
ಅಯ್ಯೋ ಹುಚ್ಚಿ ನಿನಗೆಲ್ಲೊ ಹುಚ್ಚು
ದೇಹವೇ ಇಲ್ಲದವನಲ್ಲಿ
ಹೃದಯ ಹುಡುಕುತಿರುವೆಯಲ್ಲಾ
ಹೀಗೆಕೇ ದೂರ ಹೋಗುವೆ ನಿಇ
ಪ್ರೀತಿಯ ಮಾತಿಂದ
ಹೃದಯವಿರದಿದ್ದರೆನಂತೆ
ಪ್ರೀತಿಸಲು ಅತ್ಮವಂದಿದ್ದರೆ ಸಾಕಲ್ಲವೇ
ಕಾಡಬೇಡ ಹುಡುಗಿ ನೀ ಹೀಗೆ ನನ್ನ
ಪ್ರೀತಿಸಿಯೇ ಹೃದಯ, ಮನಸ್ಸು ದೇಹ
ಎಲ್ಲ ಕಳೆದುಕೊಂಡು ಸತ್ತು ಹೋದವನು ನಾ
ಆತ್ಮವಾದರೂ ನೆಮ್ಮದಿಯಿಂದ ಇರಲಿ ಬಿಡು
ಮೋಹದ ಮಾತೇ ಆಡಲಿಲ್ಲ
ಪ್ರೇಮದ ಅ ಸೆಲೆಯಂತು ಮೊದಲೇ ಇಲ್ಲ
ಮತ್ತ್ಯಾಕೆ ಪ್ರೀತಿಸುವೆ ನೀ ನನ್ನ
ಪ್ರೀತಿ ಅನಂತ ಮೋಹದ ಭಾವ ನಿರಂತರ
ಹುಡುಗ ಸತ್ತು ಹೋದ ನಮಗ್ಯಾಕೆ
ಕೈ ಕೈ ಹಿಡಿದು ನಡೆದಾಡುವ ಹುಚ್ಚು
ಎನಂತ ಪ್ರೀತಿಸುವೇ ನೀ
ಮಣ್ಣಾದ ದೇಹ ಗೆದ್ದಲು ಹಿಡಿದ ಮೂಳೆಗಳ
ಹೊರತಾಗಿ ಮತ್ತೆನಿದೆ ನನ್ನಲ್ಲಿ
ಎಂದೂ ಮುಗಿಯದ ಪ್ರೀತಿ
ಪ್ರೀತಿಸುವ ಹೃದಯ ಇರುವಾಗ
ಮಣ್ಣಾದ ದೇಹದ ಮಾತೆಕೆ ಈಗ
ಅಯ್ಯೋ ಹುಚ್ಚಿ ನಿನಗೆಲ್ಲೊ ಹುಚ್ಚು
ದೇಹವೇ ಇಲ್ಲದವನಲ್ಲಿ
ಹೃದಯ ಹುಡುಕುತಿರುವೆಯಲ್ಲಾ
ಹೀಗೆಕೇ ದೂರ ಹೋಗುವೆ ನಿಇ
ಪ್ರೀತಿಯ ಮಾತಿಂದ
ಹೃದಯವಿರದಿದ್ದರೆನಂತೆ
ಪ್ರೀತಿಸಲು ಅತ್ಮವಂದಿದ್ದರೆ ಸಾಕಲ್ಲವೇ
ಕಾಡಬೇಡ ಹುಡುಗಿ ನೀ ಹೀಗೆ ನನ್ನ
ಪ್ರೀತಿಸಿಯೇ ಹೃದಯ, ಮನಸ್ಸು ದೇಹ
ಎಲ್ಲ ಕಳೆದುಕೊಂಡು ಸತ್ತು ಹೋದವನು ನಾ
ಆತ್ಮವಾದರೂ ನೆಮ್ಮದಿಯಿಂದ ಇರಲಿ ಬಿಡು
ಚಂದಿರನಿಗೊಂದು ಹಾಡು

ನಿನ್ನಲ್ಲೇ ಹೆಣ್ಣ ಹುಡುಕುವರು
ಹೊನ್ನಿಗೂ ನಿನ್ನೇ ಹೋಲಿಸುವರು
ತಮ್ಮ ಮಿಲನಕೂ ನಿನ್ನೇಸರೆ ಇಡುವರು
ಮಧುಚಂದ್ರವೆಂದು
ನಿನ್ನ ನೋಡೆ ಪೂಜೆ
ನಿನ್ನ ನೋಡೆ ನಮಾಜು
ತಿಂಗಳಿಗೊಂದು ಹುಣ್ಣಿಮೆಯಾದರೆ
ನಿನಗೆ ಆಗಾಗ ಗ್ರಹಣವೆಂಬ ತೊಂದರೆ
ಹುಣ್ಣಿಮೆಗೆ ಹತ್ತಿರ ಬರುವ ಇವರು
ಗ್ರಹಣಕ್ಕೆಕ್ಕೆ ದೂರ ಓಡುವರು
ಸಂಕಷ್ಟದ ದಿನ ನಿನ್ನ ನೆನೆದು
ಚೌಥಿಗೆಕೆ ನಿನ್ನ ದೂಷಿಸುವರು
ಬಿಡು ಚಂದಿರ ದುಖಿಃಸಬೇಡ
ಬರಿ ಸ್ವಾರ್ಥಿಗಳದೇ ಲೋಕವದು
ಒಮ್ಮೆ ನಿನ್ನ ಬೆಳಕ ಬೀರಿ ನೋಡು ಮಸಣದ ನೆಲದಲಿ
ನರಳುವ ಗೋರಿಯಾಳದಿಂದ ನಲಿಯುವ ಸದ್ದು ಕೇಳು
Sunday, September 7, 2008
ದಿವಂಗತನ ಸ್ವಗತ
ಇದು ಹತಾಶ ಪ್ರೇಮಿಯ ಕನವರಿಕೆಯಾಗಲಿ, ಅಥವಾ ನಿರಾಶಯಿಮ್ದ ಮೂಡುತ್ತಿರವ ಬರವಣಿಗೆಯಾಗಲಿ ಖಂಡಿತ ಅಲ್ಲ ಬದುಕಿರುವಾಗ ನನ್ನದು, ನನ್ನವಳು ಹೀಗೆ ಕನವರಿಕೆಯ ಬೊಂಬಡಾ ಹೊಡೆಯುವ ನಾವು ದಿವಂಗತರಾದರೆ ??? ನನ್ನಲ್ಲಿ ನಾ ಕೇಳಿಕೊಳ್ಳುತ್ತಿರುವ ಪ್ರಶ್ನೆ ಇದು?? ಉತ್ತರ ಕಷ್ಟ್ ಆಲ್ವಾ
ಆಮೇಲೆ ಇಲ್ಲಿ ಬರುವ ಬರಹಗಳು ಬರಿ ಸಾವಿಗೆ ಹತ್ತಿರದವು ಒಪ್ಪಿಸಿಕೊಳ್ಳಿ
ಆಮೇಲೆ ಇಲ್ಲಿ ಬರುವ ಬರಹಗಳು ಬರಿ ಸಾವಿಗೆ ಹತ್ತಿರದವು ಒಪ್ಪಿಸಿಕೊಳ್ಳಿ
Tuesday, September 2, 2008
ಸುಡುಗಾಡಿನ ಹಾಡು
ಅಲ್ಲೊಂದು ಗೋರಿ
ಇಲ್ಲೊಂದು ಸಮಾಧಿ
ಅವನ ಸಾವಿಗೂ ಕಾರಣವಿಲ್ಲ
ಇವನ ಮರಣಕೂ ಉತ್ತರವಿಲ್ಲ
ಅಲ್ಲಷ್ಟು ಜನ ಕಾಯುತಲಿರುವರು
ಹೆಣ ಪೂರ ಸುಡಲೆಂದು
ಇಲ್ಲಷ್ಟು ಜನ ಕಾಯುತಲಿರುವರು
ಅರ್ಧ ಸುಟ್ಟ ಹೆಣವನು ಕದಿಯಲೆಂದು
ಸತ್ತವನ ಹೆಂಡತಿಯ ಕಣ್ಣಲ್ಲಿ
ನೋವಿನಾಚೆಗಿನ ಸಂತೋಷದ ಹೊಳೆ
ತಾಯಿಯ ಕಣ್ಣಲ್ಲಿ ಬರಿ ದುಖಃದ ಸೆಲೆ
ಹೆಣ ತಂದವರಿಗೆ ನೂರು ನೂರು
ಕಟ್ಟಿಗೆ ಇಟ್ಟವನಿಗೆ ನೂರು
ಸುಟ್ಟವನಿಗೆ ಇನ್ನೂರು
ಇಲ್ಲೂ ಕೂಡ ದುಡ್ಡಿನದೆ ಕಾರುಬಾರು
ಸತ್ತವನ ಮನೆಯವರಿಗಾಗಲೇ
ಸೂತಕದ ಮೈಲಿಗೆ ತೊಳೆಯುವ ಅವಸರ
ಕುಣಿದು ದಣಿದವರಿಗೆ ಕುಡಿಯುವ ಸಡಗರ
ಮನವೆಷ್ಟೇ ಮೈಲಿಗೆ ಇದ್ದರೂ ಎಲ್ಲರಿಗೂ ಮೈತೊಳೆಯುವ ಅವಸರ
ಮರಳೀ ಇಲ್ಲಿಗೆ ಬರಬೇಕೆಂದು ತಿಳಿದೂ
ಹೊರ ಹೊಗಲು ಇವರಿಗೆಕಿಷ್ಟು ಅವಸರ
ಇಲ್ಲೊಂದು ಸಮಾಧಿ
ಅವನ ಸಾವಿಗೂ ಕಾರಣವಿಲ್ಲ
ಇವನ ಮರಣಕೂ ಉತ್ತರವಿಲ್ಲ
ಅಲ್ಲಷ್ಟು ಜನ ಕಾಯುತಲಿರುವರು
ಹೆಣ ಪೂರ ಸುಡಲೆಂದು
ಇಲ್ಲಷ್ಟು ಜನ ಕಾಯುತಲಿರುವರು
ಅರ್ಧ ಸುಟ್ಟ ಹೆಣವನು ಕದಿಯಲೆಂದು
ಸತ್ತವನ ಹೆಂಡತಿಯ ಕಣ್ಣಲ್ಲಿ
ನೋವಿನಾಚೆಗಿನ ಸಂತೋಷದ ಹೊಳೆ
ತಾಯಿಯ ಕಣ್ಣಲ್ಲಿ ಬರಿ ದುಖಃದ ಸೆಲೆ
ಹೆಣ ತಂದವರಿಗೆ ನೂರು ನೂರು
ಕಟ್ಟಿಗೆ ಇಟ್ಟವನಿಗೆ ನೂರು
ಸುಟ್ಟವನಿಗೆ ಇನ್ನೂರು
ಇಲ್ಲೂ ಕೂಡ ದುಡ್ಡಿನದೆ ಕಾರುಬಾರು
ಸತ್ತವನ ಮನೆಯವರಿಗಾಗಲೇ
ಸೂತಕದ ಮೈಲಿಗೆ ತೊಳೆಯುವ ಅವಸರ
ಕುಣಿದು ದಣಿದವರಿಗೆ ಕುಡಿಯುವ ಸಡಗರ
ಮನವೆಷ್ಟೇ ಮೈಲಿಗೆ ಇದ್ದರೂ ಎಲ್ಲರಿಗೂ ಮೈತೊಳೆಯುವ ಅವಸರ
ಮರಳೀ ಇಲ್ಲಿಗೆ ಬರಬೇಕೆಂದು ತಿಳಿದೂ
ಹೊರ ಹೊಗಲು ಇವರಿಗೆಕಿಷ್ಟು ಅವಸರ
ಸುಂದರಿ
ಅಂದು ಅವಳೊಬ್ಬ ಸುಂದರಿ
ಹುಡುಗರೆದೆಯ ನಗಾರಿ
ಹತ್ತಿದರೆ ಸಾರೋಟು
ಇಳಿದರೆ ರತ್ನಗಂಬಳಿ
ಇಂದು ಗೆದ್ದಲು ಹತ್ತಿದ ಗೋರಿಯೊಳಗಿನ ಹೆಣ
ಸುಂದರ ಮುಖವಿದ್ದಲ್ಲಿ ಬರಿ ಬುರುಡೆಯ ಚಿತ್ರಣ
ಅವಳು ಕಾಲಿಟ್ಟ ನೆಲವನುಚುಂಬಿಸುತ್ತಿದ್ದರಂದು
ಅವಳು ಮಲಗಿದ ಜಾಗದಲ್ಲಿಂದು
ಕೂಡಿರುತ್ತದೆ ಬರಿ ನಾಯಿ ನರಿಗಳ ಹಿಂಡು
ನೊಂದು ನರಳುತಿದೆ
ಹಳೆಯ ದಿನಗಳ ನೆನೆ ನೆನೆದು ಅವಳ ಆತ್ಮವಿಂದು
ಮಹಲಿನಲ್ಲಿದ್ದವಳಿಗೆ
ಸುಡುಗಾಡೆ ಅರಮನೆಯಿಂದು
ಅಂದು ಅವಳೊಬ್ಬ ಸುಂದರಿ
ಹುಡುಗರೆದೆಯ ನಗಾರಿ
ಹತ್ತಿದರೆ ಸಾರೋಟು
ಇಳಿದರೆ ರತ್ನಗಂಬಳಿ
ಹುಡುಗರೆದೆಯ ನಗಾರಿ
ಹತ್ತಿದರೆ ಸಾರೋಟು
ಇಳಿದರೆ ರತ್ನಗಂಬಳಿ
ಇಂದು ಗೆದ್ದಲು ಹತ್ತಿದ ಗೋರಿಯೊಳಗಿನ ಹೆಣ
ಸುಂದರ ಮುಖವಿದ್ದಲ್ಲಿ ಬರಿ ಬುರುಡೆಯ ಚಿತ್ರಣ
ಅವಳು ಕಾಲಿಟ್ಟ ನೆಲವನುಚುಂಬಿಸುತ್ತಿದ್ದರಂದು
ಅವಳು ಮಲಗಿದ ಜಾಗದಲ್ಲಿಂದು
ಕೂಡಿರುತ್ತದೆ ಬರಿ ನಾಯಿ ನರಿಗಳ ಹಿಂಡು
ನೊಂದು ನರಳುತಿದೆ
ಹಳೆಯ ದಿನಗಳ ನೆನೆ ನೆನೆದು ಅವಳ ಆತ್ಮವಿಂದು
ಮಹಲಿನಲ್ಲಿದ್ದವಳಿಗೆ
ಸುಡುಗಾಡೆ ಅರಮನೆಯಿಂದು
ಅಂದು ಅವಳೊಬ್ಬ ಸುಂದರಿ
ಹುಡುಗರೆದೆಯ ನಗಾರಿ
ಹತ್ತಿದರೆ ಸಾರೋಟು
ಇಳಿದರೆ ರತ್ನಗಂಬಳಿ
Subscribe to:
Comments (Atom)