Tuesday, September 2, 2008

ಮಳೆಯಾಗಿದೆ, ಕೊಸಿ ನದಿಯ ಕೋಪಕ್ಕೆ ತುತ್ತಾದವರಿಗೆ ಈ ಹಾಡು

ಮಳೆಯಾಗಿದೆ ನಮ್ಮ ಊರಲ್ಲಿ
ಎಂದು ಯಾರು ಕಾಣದಂತ ಮಳೆ
ಯಾರೋ ಹೇಳಿದರು ಅವರ ಮುತ್ತಜ್ಜನ ಕಾಲದಲ್ಲಾಗಿತ್ತಂತೆ
ಇಂಥ ಮಳೆ

ಎಲ್ಲರ ಕಣ್ಣಲ್ಲೂ ಹಸಿರು ಹಸಿರು ಚಿತ್ರಣ
ನನ್ನ ಕಣ್ಣಲ್ಲಿ ಬರಿ ನೆಲದಿಂದೆದ್ದ
ಹಳೆ ಗೋರಿಗಳ ಹೂರಣ

ಅವರಿಗೆ ಮಳೆ ಬಿದ್ದಲ್ಲಿ ಚಿನ್ನ ಬೆಳೆಯುವಾಸೆ
ನನಗೆ ನೆಲದಲಿ ಬಿದ್ದವರ ನೋವು ಕೇಳುವಾಸೆ
ಕೆಲವರಿಗೆ ಮಳೆನಂತರ ಆಲಿಕಲ್ಲು ಆಯುವಾಸೆ
ನನಗೆ ಗೋರಿಗಳಿಂದ ಬಿರಿದ
ಛಿದ್ರಗೊಂಡ ಹೃದಯಗಳಿಗೆ ಸಾಂತ್ವಾನ ಹೇಳುವಾಸೆ

ನಿನ್ನೆ ಹೂದೋಟವಿತ್ತಲ್ಲಿ
ಮಳೆ ಬಂದ ರಭಸಕ್ಕೆಇಂದು ಸುಡುಗಾಡು ಸೃಷ್ಠಿಯಾಗಿದೆಯಲ್ಲಿ
ಹೂ ಕಂಡು ನಗೆಯರಳಿಸುತ್ತಿದ್ದವರು
ಹೆಣ ಕಂಡು ನರಳುತ್ತಿದ್ದಾರೆ
ಮಳೆಯಾಗಿದೆ ನಮ್ಮ ಊರಲ್ಲಿ
ಎಂದು ಯಾರು ಕಾಣದಂತ ಮಳೆ

1 comment:

sunaath said...

ಒಂದೆಡೆ ಹಗಲು, ಒಂದೆಡೆ ಕತ್ತಲು; ಇದು ಪ್ರಕೃತಿಯ ನಿಯಮ.