
ನಿನ್ನಲ್ಲೇ ಹೆಣ್ಣ ಹುಡುಕುವರು
ಹೊನ್ನಿಗೂ ನಿನ್ನೇ ಹೋಲಿಸುವರು
ತಮ್ಮ ಮಿಲನಕೂ ನಿನ್ನೇಸರೆ ಇಡುವರು
ಮಧುಚಂದ್ರವೆಂದು
ನಿನ್ನ ನೋಡೆ ಪೂಜೆ
ನಿನ್ನ ನೋಡೆ ನಮಾಜು
ತಿಂಗಳಿಗೊಂದು ಹುಣ್ಣಿಮೆಯಾದರೆ
ನಿನಗೆ ಆಗಾಗ ಗ್ರಹಣವೆಂಬ ತೊಂದರೆ
ಹುಣ್ಣಿಮೆಗೆ ಹತ್ತಿರ ಬರುವ ಇವರು
ಗ್ರಹಣಕ್ಕೆಕ್ಕೆ ದೂರ ಓಡುವರು
ಸಂಕಷ್ಟದ ದಿನ ನಿನ್ನ ನೆನೆದು
ಚೌಥಿಗೆಕೆ ನಿನ್ನ ದೂಷಿಸುವರು
ಬಿಡು ಚಂದಿರ ದುಖಿಃಸಬೇಡ
ಬರಿ ಸ್ವಾರ್ಥಿಗಳದೇ ಲೋಕವದು
ಒಮ್ಮೆ ನಿನ್ನ ಬೆಳಕ ಬೀರಿ ನೋಡು ಮಸಣದ ನೆಲದಲಿ
ನರಳುವ ಗೋರಿಯಾಳದಿಂದ ನಲಿಯುವ ಸದ್ದು ಕೇಳು
1 comment:
ಚಂದ್ರನಿಗೆ discrimination ಇಲ್ಲ, ಗೆಳೆಯಾ.
ಆತ ಎಲ್ಲೆಡೆಯೂ ಬೆಳಕು ಚೆಲ್ಲುತ್ತಲೇ ಇದ್ದಾನೆ.
ಒಳ್ಳೆಯ ಕವನ.
Post a Comment