ಇಲ್ಲೊಂದು ಸಮಾಧಿ
ಅವನ ಸಾವಿಗೂ ಕಾರಣವಿಲ್ಲ
ಇವನ ಮರಣಕೂ ಉತ್ತರವಿಲ್ಲ
ಅಲ್ಲಷ್ಟು ಜನ ಕಾಯುತಲಿರುವರು
ಹೆಣ ಪೂರ ಸುಡಲೆಂದು
ಇಲ್ಲಷ್ಟು ಜನ ಕಾಯುತಲಿರುವರು
ಅರ್ಧ ಸುಟ್ಟ ಹೆಣವನು ಕದಿಯಲೆಂದು
ಸತ್ತವನ ಹೆಂಡತಿಯ ಕಣ್ಣಲ್ಲಿ
ನೋವಿನಾಚೆಗಿನ ಸಂತೋಷದ ಹೊಳೆ
ತಾಯಿಯ ಕಣ್ಣಲ್ಲಿ ಬರಿ ದುಖಃದ ಸೆಲೆ
ಹೆಣ ತಂದವರಿಗೆ ನೂರು ನೂರು
ಕಟ್ಟಿಗೆ ಇಟ್ಟವನಿಗೆ ನೂರು
ಸುಟ್ಟವನಿಗೆ ಇನ್ನೂರು
ಇಲ್ಲೂ ಕೂಡ ದುಡ್ಡಿನದೆ ಕಾರುಬಾರು
ಸತ್ತವನ ಮನೆಯವರಿಗಾಗಲೇ
ಸೂತಕದ ಮೈಲಿಗೆ ತೊಳೆಯುವ ಅವಸರ
ಕುಣಿದು ದಣಿದವರಿಗೆ ಕುಡಿಯುವ ಸಡಗರ
ಮನವೆಷ್ಟೇ ಮೈಲಿಗೆ ಇದ್ದರೂ ಎಲ್ಲರಿಗೂ ಮೈತೊಳೆಯುವ ಅವಸರ
ಮರಳೀ ಇಲ್ಲಿಗೆ ಬರಬೇಕೆಂದು ತಿಳಿದೂ
ಹೊರ ಹೊಗಲು ಇವರಿಗೆಕಿಷ್ಟು ಅವಸರ
5 comments:
ಸುಡುಗಾಡಿನ ಹಾಡು!
Good title.
ಕೊನೆಯ ಮೂರು ಸಾಲುಗಳಿಗೆ ನಮ್ಮ ಸಲಾಂ
)-:!.....
ಮರಳೀ ಇಲ್ಲಿಗೆ ಬರಬೇಕೆಂದು ತಿಳಿದೂ
ಹೊರ ಹೊಗಲು ಇವರಿಗೆಕಿಷ್ಟು ಅವಸರ
ಬಹಳಾ ವಿಚಾರಾ ಮಾಡಿದ್ದೇನೆ....ಇನ್ನೂ ಗೊತ್ತಾಗಿಲ್ಲ...! ಅವಸರವೇ ಅವಸರ. ದಿವಂಗತಕ್ಕೆ ಸ್ವಾಗತ.
ನಿಮ್ಮನ್ನು ದಿವಂಗತ ಎಂದು ಕರೆಯಲು ಮುಜುಗರ. ಅದಕ್ಕೆ ಚಿರಂಜೀವಿ ಅನ್ನುತ್ತೇನೆ.
ಕವಿತೆ ತುಂಬಾ ಚೆನ್ನಾಗಿದೆ. ಮಸಣ ನಮ್ಮಲ್ಲಿ ವಿವೇಕ ಮೂಡಿಸುವ ತಾಣ. ನಮ್ಮ ನಶ್ವರತೆ ನೆನಪಿಸುವ ತಾಣ. ಅದನ್ನು ಕವಿತೆಯ ಮೂಲಕ ನೆನಪಿಸಿಕೊಟ್ಟಿದ್ದೀರಿ. ಥ್ಯಾಂಕ್ಸ್.
- ಪಲ್ಲವಿ ಎಸ್.
Post a Comment