Tuesday, September 2, 2008

ಸುಡುಗಾಡಿನ ಹಾಡು

ಅಲ್ಲೊಂದು ಗೋರಿ
ಇಲ್ಲೊಂದು ಸಮಾಧಿ
ಅವನ ಸಾವಿಗೂ ಕಾರಣವಿಲ್ಲ
ಇವನ ಮರಣಕೂ ಉತ್ತರವಿಲ್ಲ

ಅಲ್ಲಷ್ಟು ಜನ ಕಾಯುತಲಿರುವರು
ಹೆಣ ಪೂರ ಸುಡಲೆಂದು
ಇಲ್ಲಷ್ಟು ಜನ ಕಾಯುತಲಿರುವರು
ಅರ್ಧ ಸುಟ್ಟ ಹೆಣವನು ಕದಿಯಲೆಂದು

ಸತ್ತವನ ಹೆಂಡತಿಯ ಕಣ್ಣಲ್ಲಿ
ನೋವಿನಾಚೆಗಿನ ಸಂತೋಷದ ಹೊಳೆ
ತಾಯಿಯ ಕಣ್ಣಲ್ಲಿ ಬರಿ ದುಖಃದ ಸೆಲೆ

ಹೆಣ ತಂದವರಿಗೆ ನೂರು ನೂರು
ಕಟ್ಟಿಗೆ ಇಟ್ಟವನಿಗೆ ನೂರು
ಸುಟ್ಟವನಿಗೆ ಇನ್ನೂರು
ಇಲ್ಲೂ ಕೂಡ ದುಡ್ಡಿನದೆ ಕಾರುಬಾರು

ಸತ್ತವನ ಮನೆಯವರಿಗಾಗಲೇ
ಸೂತಕದ ಮೈಲಿಗೆ ತೊಳೆಯುವ ಅವಸರ
ಕುಣಿದು ದಣಿದವರಿಗೆ ಕುಡಿಯುವ ಸಡಗರ
ಮನವೆಷ್ಟೇ ಮೈಲಿಗೆ ಇದ್ದರೂ ಎಲ್ಲರಿಗೂ ಮೈತೊಳೆಯುವ ಅವಸರ

ಮರಳೀ ಇಲ್ಲಿಗೆ ಬರಬೇಕೆಂದು ತಿಳಿದೂ
ಹೊರ ಹೊಗಲು ಇವರಿಗೆಕಿಷ್ಟು ಅವಸರ

5 comments:

sunaath said...

ಸುಡುಗಾಡಿನ ಹಾಡು!
Good title.

MD said...

ಕೊನೆಯ ಮೂರು ಸಾಲುಗಳಿಗೆ ನಮ್ಮ ಸಲಾಂ

PRANJALE said...

)-:!.....

ಸ್ವಗತ.... said...

ಮರಳೀ ಇಲ್ಲಿಗೆ ಬರಬೇಕೆಂದು ತಿಳಿದೂ
ಹೊರ ಹೊಗಲು ಇವರಿಗೆಕಿಷ್ಟು ಅವಸರ
ಬಹಳಾ ವಿಚಾರಾ ಮಾಡಿದ್ದೇನೆ....ಇನ್ನೂ ಗೊತ್ತಾಗಿಲ್ಲ...! ಅವಸರವೇ ಅವಸರ. ದಿವಂಗತಕ್ಕೆ ಸ್ವಾಗತ.

ಪಲ್ಲವಿ ಎಸ್‌. said...

ನಿಮ್ಮನ್ನು ದಿವಂಗತ ಎಂದು ಕರೆಯಲು ಮುಜುಗರ. ಅದಕ್ಕೆ ಚಿರಂಜೀವಿ ಅನ್ನುತ್ತೇನೆ.

ಕವಿತೆ ತುಂಬಾ ಚೆನ್ನಾಗಿದೆ. ಮಸಣ ನಮ್ಮಲ್ಲಿ ವಿವೇಕ ಮೂಡಿಸುವ ತಾಣ. ನಮ್ಮ ನಶ್ವರತೆ ನೆನಪಿಸುವ ತಾಣ. ಅದನ್ನು ಕವಿತೆಯ ಮೂಲಕ ನೆನಪಿಸಿಕೊಟ್ಟಿದ್ದೀರಿ. ಥ್ಯಾಂಕ್ಸ್‌.

- ಪಲ್ಲವಿ ಎಸ್‌.