ಕೈ ಕೈ ಹಿಡಿದು ನಡೆದಾಡಲಿಲ್ಲ
ಮೋಹದ ಮಾತೇ ಆಡಲಿಲ್ಲ
ಪ್ರೇಮದ ಅ ಸೆಲೆಯಂತು ಮೊದಲೇ ಇಲ್ಲ
ಮತ್ತ್ಯಾಕೆ ಪ್ರೀತಿಸುವೆ ನೀ ನನ್ನ
ಪ್ರೀತಿ ಅನಂತ ಮೋಹದ ಭಾವ ನಿರಂತರ
ಹುಡುಗ ಸತ್ತು ಹೋದ ನಮಗ್ಯಾಕೆ
ಕೈ ಕೈ ಹಿಡಿದು ನಡೆದಾಡುವ ಹುಚ್ಚು
ಎನಂತ ಪ್ರೀತಿಸುವೇ ನೀ
ಮಣ್ಣಾದ ದೇಹ ಗೆದ್ದಲು ಹಿಡಿದ ಮೂಳೆಗಳ
ಹೊರತಾಗಿ ಮತ್ತೆನಿದೆ ನನ್ನಲ್ಲಿ
ಎಂದೂ ಮುಗಿಯದ ಪ್ರೀತಿ
ಪ್ರೀತಿಸುವ ಹೃದಯ ಇರುವಾಗ
ಮಣ್ಣಾದ ದೇಹದ ಮಾತೆಕೆ ಈಗ
ಅಯ್ಯೋ ಹುಚ್ಚಿ ನಿನಗೆಲ್ಲೊ ಹುಚ್ಚು
ದೇಹವೇ ಇಲ್ಲದವನಲ್ಲಿ
ಹೃದಯ ಹುಡುಕುತಿರುವೆಯಲ್ಲಾ
ಹೀಗೆಕೇ ದೂರ ಹೋಗುವೆ ನಿಇ
ಪ್ರೀತಿಯ ಮಾತಿಂದ
ಹೃದಯವಿರದಿದ್ದರೆನಂತೆ
ಪ್ರೀತಿಸಲು ಅತ್ಮವಂದಿದ್ದರೆ ಸಾಕಲ್ಲವೇ
ಕಾಡಬೇಡ ಹುಡುಗಿ ನೀ ಹೀಗೆ ನನ್ನ
ಪ್ರೀತಿಸಿಯೇ ಹೃದಯ, ಮನಸ್ಸು ದೇಹ
ಎಲ್ಲ ಕಳೆದುಕೊಂಡು ಸತ್ತು ಹೋದವನು ನಾ
ಆತ್ಮವಾದರೂ ನೆಮ್ಮದಿಯಿಂದ ಇರಲಿ ಬಿಡು
Subscribe to:
Post Comments (Atom)
2 comments:
ಕವನ ಇಷ್ಟವಾಯಿತು.
ಕೈ ಕೈ ಹಿಡಿದು ನಡೆದಾಡಲಿಲ್ಲ
ಮೋಹದ ಮಾತೇ ಆಡಲಿಲ್ಲ
ಪ್ರೇಮದ ಅ ಸೆಲೆಯಂತು ಮೊದಲೇ ಇಲ್ಲ
ಮತ್ತ್ಯಾಕೆ ಪ್ರೀತಿಸುವೆ ನೀ ನನ್ನ -- ಈ ಸಾಲುಗಳು ಅರ್ಥ ಆಗ್ಲಿಲ್ಲ....
ಆದರೆ - 'ಎಲ್ಲ ಕಳೆದುಕೊಂಡು ಸತ್ತು ಹೋದವನು ನಾ
ಆತ್ಮವಾದರೂ ನೆಮ್ಮದಿಯಿಂದ ಇರಲಿ ಬಿಡು ' - - - > ಸೂಪರ್. ಆತ್ಮವಾದರೂ ನೆಮ್ಮದಿಯಿಂದ ಇರಲಿ ಬಿಡು. ದೋಣಿ ಸಾಗಲಿ ಮಗೆಷಾ....
Post a Comment